ನಿಮ್ಮ  ಅನನ್ಯ ಬಳಗ  

ಅನನ್ಯ ಮಲ್ಟಿಮೀಡಿಯಾ ಕ್ರಿಯೇಷನ್ಸ್

ಆನ್ಲೈನ್ ಟಿವಿ | ಪಿ ಆರ್ | ಈವೆಂಟ್ಸ್

 ಸಾಮಾಜಿಕ ಜಾಲತಾಣತಾಣಗಳ ಮೂಲಕ ಅನನ್ಯ ಆನ್ಲೈನ್ ಟಿವಿಯ ಮಾಧ್ಯಮ ಸೇವೆ ನೀಡುವುದು. ಸಮಾಜದ ವಿವಿಧ ರಂಗದ ಸಂಘ ಸಂಸ್ಥೆಗಳಿಗೆ, ಗಣ್ಯರಿಗೆ, ವ್ಯಾಪಾರೋದ್ಯಮಗಳಿಗೆ ಮತ್ತು ಗ್ರಾಹಕರಿಗೆ ಪಿ ಆರ್ ಮೀಡಿಯಾ ಸೇವೆಗಳನ್ನು ಒದಗಿಸುವುದು. ಮತ್ತು ಖಾಸಗಿ ಈವೆಂಟ್ ಗಳು ಸೇರಿಂದಂತೆ, ಸರ್ಕಾರಿ ಹಾಗೂ ಖಾಸಗಿ ಈವೆಂಟ್ ಗಳನ್ನು ಆರ್ಗನೈಜ್ ಮಾಡುವ ಸೇವೆ ನೀಡುವುದು ನಮ್ಮ `ಅನನ್ಯ ಮಲ್ತಟಿಮೀಡಿಯಾ ಕ್ರಿಯೇಷನ್ಸ್ ಸಂಸ್ಥೆಯ ಪ್ರಮುಖ ಕಾರ್ಯಚಟುವಟಿಕೆಅನನ್ಯ ಸೋಶಿಯಲ್ ಮೀಡಿಯಾ ಟ್ರಸ್ಟ್ ನಿಂದ ನಿರ್ಮಾಣವಾಗುವ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಸಂಸ್ಥೆಯಿಂದ ಆನ್ಲೈನ್ ಟಿವಿ ಆರಂಭಿಲಾಗಿದೆ ಇದು, ಅನನ್ಯ ಟಿವಿ ಡಾಟ್ ಕಾಮ್ ವೆಬ್ ಸೈಟ್ ,  ಅನನ್ಯ ಮೊಬೈಲ್ ಆ್ಯಪ್ , ಯೂಟ್ಯೂಬ್, ಪೇಸ್ ಬುಕ್ ಮತ್ತು ಮತ್ತಿತರೆ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಸಾರವಾಗುವುದು. ಕೆಲವೊಮ್ಮೆ ಕೆಲವು ಸ್ಯಾಟ್ ಲೈಟ್ ಮತ್ತು ಕೇಬಲ್ ಟಿವಿಗಳಲ್ಲಿಯೂ ಪ್ರಸಾರವಾಗುವುದು. ಜೊತೆಗೆ ಸಾಂಸ್ಕೃತಿಕತೆಯನ್ನು ಪ್ರೋತ್ಸಾಹಿಸುವುದು,  ಒಂದಷ್ಟು ಉದ್ಯೋಗ ಸೃಷ್ಠಿಸುವ ಪ್ರಯತ್ನವನ್ನು ಕೂಡ ಸಂಸ್ಥೆ ಮಾಡುತ್ತಿದೆ. ಅನನ್ಯ ಆನ್ಲೈನ್ ಟಿವಿ ಕಾರ್ಯಕ್ರಮ ನಿರ್ಮಾಣದ ವೆಚ್ಚಕ್ಕಾಗಿ ವಿನಿಯೋಗಿಸಲು ಬೇಕಾದ ಆದಾಯದ ಸಂಪಾದನೆಗಾಗಿ ಪರ್ಯಾಯ ಸೇವೆಗಳನ್ನಾಗಿ `ಪಿ ಆರ್ ಮೀಡಿಯಾ ಸರ್ವೀಸ್ ಮತ್ತು ಈವೆಂಟ್ ಆರ್ಗ್ ನೈಜೆಷನ್ ಸೇವೆಗಳನ್ನು ನೀಡುವ ಪ್ರಯತ್ನವೂ ಇಲ್ಲಿದೆ.

ಎಂ ಬಿ ಮಾಲಿಪಾಟೀಲ್

ಫೌಂಡರ್ ಪ್ರೊಪ್ರೇಟರ್ ಮತ್ತು ಪ್ರೊಗ್ರಾಮ್ ಡೈರೆಕ್ಟರ್         

                ಮಲ್ಲನಗೌಡ ಮಾಲಿಪಾಟೀಲ್ (ಇವರನ್ನು ಕಮಲ್ನಯನ್ ಪಾಟೀಲ್ , ಎಂ ಬಿ ಪಾಟೀಲ್, ಎಂ ಬಿ ಮಾಲಿಪಾಟೀಲ್  ಅಂತಾನು ಕರೆಯುತ್ತಾರೆ.) ಇವರು, ಅನನ್ಯ ಮಲ್ಟಿಮೀಡಿಯಾ ಕ್ರಿಯೆಷನ್ಸ್ ಸಂಸ್ಥೆಯ ಫೌಂಡರ್ ಪ್ರೊಪ್ರೇಟರ್ ಮತ್ತು ಪ್ರೊಗ್ರಾಮ್ ಡೈರೆಕ್ಟರ್ . ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಮುರಡಿ ಎಂಬ ಗ್ರಾಮದವರು. ಬಿ , ಡಿ ಈಡಿ, ಡಿಪ್ಲೋಮಾ ಇನ್ ಥಿಯೇಟರ್ ಆರ್ಟ್ಸ್ , ಡಿಪ್ಲೋಮಾ ಇನ್ ಫಿಲಂ ಆರ್ಟ್ಸ್ ನಲ್ಲಿ ಪದವಿ ಪಡೆದಿದ್ದಾರೆ. ಟಿವಿ 1, ವಿ ಪಿ ನ್ಯೂಸ್, ಸ್ಪಂದನ, ಟಿವಿ ವಾಹಿನಿಗಳಲ್ಲಿ ಕಾರ್ಯಕ್ರಮ ನಿರ್ದೇಶಕರಾಗಿ, ನಿರೂಪಕಾರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು  ಜನತಾ ಟಿವಿ ವಾಹಿನಿಗೆ ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ವಿವಿದ ಪತ್ರಿಕೆಗಳಿಗೆ ಲೇಖನ ಮತ್ತು ಅಂಕಣಗಳನ್ನು ಬರೆದಿದ್ದಾರೆ. ಶಿವಸಂಚಾರ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಮತ್ತು ತಂಡಗಳಲ್ಲಿ,  ರಂಗಭೂಮಿ ನಟನಾಗಿ ನಿರ್ದೇಶಕನಾಗಿಯೂ ಸೇವೆ ಸಲ್ಲಿಸಿದ್ದಾರೆ. ಕ್ರಾಂತಿಗಂಗೋತ್ರಿ ಅಕ್ಕನಾಗಲಾಂಬಿಕೆ ಎಂಬ ಸಾಕ್ಷ್ಯಚಿತ್ರ ನಿರ್ದೇಶನ ಮಾಡಿದ್ದಾರೆ.  ಹೀಗೆ ವೈವಿಧ್ಯಮಯವಾದ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿ ತಮ್ಮದೇ ಆದ ಅನುಭವದೊಂದಿಗೆ ಇದೀಗ ಹೊಸ ಪ್ರಯತ್ನವಾಗಿ ಸಂಸ್ಥೆಯನ್ನು ಆರಂಭ ಮಾಡಿದ್ದಾರೆ. ಸಂಸ್ಥೆಯಿಂದ ಪ್ರಸಾರವಾಗುವ ಅನನ್ಯ ಆನ್ಲೈನ್ ಟಿವಿಯಲ್ಲಿ ಬರುವ ಎಲ್ಲ ಕಾರ್ಯಕ್ರಮಗಳ ವಿನ್ಯಾಸ ಮತ್ತು ನಿರ್ದೇಶನವನ್ನು ಮಾಲಿಪಾಟೀಲ್  ಮಾಡುತ್ತಿದ್ದಾರೆ.

ನಮ್ಮ ನಿರೂಪಕರು ಮತ್ತು ಸಂಪನ್ಮೂಲ ವ್ಯಕ್ತಿಗಳ ಬಳಗ         

                ಆರೋಗ್ಯಯುತ ಸಮಾಜ ನಿರ್ಮಾಣಕ್ಕ ಸಾಮಾಜಿಕ ಮಾಧ್ಯಮದಿಂದ ಜಾಗೃತಿ ಉಂಟುಮಾಡಬಹುದಾದ ಕಾರ್ಯಕ್ರಮಗಳನ್ನು ಅನನ್ಯ ಆನ್ಲೈನ್ ಟಿವಿ ನಿರ್ಮಿಸುವ ಪ್ರಯತ್ನದಲ್ಲಿದೆ. ಕಲೆ,ಸಾಹಿತ್ಯ, ಸಂಸ್ಕೃತಿ, ಕ್ರೀಡೆ,ಮಾಹಿತಿ ಮತ್ತು ಮನೋರಂಜನಾತ್ಮಕವಾದ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ನೀಡುವ ಹಂಬಲವಿಲ್ಲಿದೆ. ಈ ಎಲ್ಲ ಪ್ರಯತ್ನಗಳಿಗೆ ಹಲವು ಜನ ನಿರೂಪಕ-ನರೂಪಕಿಯರು ಸಾಥ್ ನೀಡುತ್ತಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳ ಮತ್ತು ಎಂಟರ್ ಟೈನ್ ಮೆಂಟ್ ಚಾನೆಲ್ ಗಳ ನಿರೂಪಕರು ಗೌರವಪೂರ್ವಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೆ ಕನ್ನಡ ಸಾಂಸ್ಕೃತಿಕ ಲೋಕದ ನೂರಾರು ಗಣ್ಯರು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ವೈವಿಧ್ಯಮಯ ಕಾರ್ಯಕ್ರಮಗಳ ನಿರ್ಮಾಣಕ್ಕಾಗಿ, ಕಿರುತೆರೆ ಸಿನಿಮಾ ರಂಗ, ರಂಗಭೂಮಿ, ಕ್ರೀಡೆ, ಕಲೆ ಸಾಹಿತ್ಯ ಸಂಸ್ಕೃತಿ ಮತ್ತು ಪತ್ರಿಕೊದ್ಯಮ ರಂಗದ ಗಣ್ಯರು ವಿವಿಧ ಕಾರ್ಯಕ್ರಮಗಳಲ್ಲಿ ಆತಿಥ್ಯಪೂರ್ವಕವಾಗಿ ಮತ್ತು ಗೌರವಪೂರ್ವಕವಾಗಿ ಪಾಲ್ಗೊಳ್ಳುತ್ತಿದ್ದಾರೆ.

ನಮ್ಮ ತಾಂತ್ರಿಕ ಬಳಗ

ಪ್ರಶಾಂತ್  ಕೆ

   ಕನ್ಸಲ್ಟಂಟ್ ಗ್ರಾಫಿಕ್ ಡಿಜೈನರ್ ಮತ್ತು  ಟೆಕ್ನಿಕಲ್ ಹೆಡ್                 

            ಕಳೆದ ಹತ್ತಾರು ವರ್ಷಗಳಿಂದ ಟಿವಿ ಮಾಧ್ಯಮದ ತಾಂತ್ರಿಕ ವಲಯದದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಪ್ರಶಾಂತ್ . ಮೂಲತಃ ಉಡುಪಿ ಜಿಲ್ಲೆಯ.. ಗ್ರಾಮದವರು.  ಗ್ರಾಫಿಕ್ಸ್ ಡಿಜೈನಿಂಗ್, ವೀಡಿಯೊ ಎಡಿಟಿಂಗ್, ಅನಿಮೇಷನ್ ನಲ್ಲಿ ಸಾಕಷ್ಟು ಅನುಭವ ಇವರಿಗಿದೆ. ಸದ್ಯ ಬೆಂಗಳೂರಿನ ಜನತಾ ವಾಹಿನಿಯಾ ತಾಂತ್ರಿಕ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ವಾಹಿನಿಗಾಗಿಯೂ ಕ್ರೀಯಾಶೀಲತೆಯಿಂದ ಗೌರವಪೂರ್ವಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸುಶ್ರುತ್ ಭಟ್

ಕನ್ಸಲ್ಟಂಟ್ ಗ್ರಾಫಿಕ್ ಡಿಜೈನರ್

           

         ಕರಾವಳಿಯ ತುಳು ಚಿತ್ರರಂಗದಲ್ಲಿ ಹಲವು ತುಳು ಸಿನಿಮಾಗಳಲ್ಲಿ ಗ್ರಾಫಿಕ್ಸ್ ಡಿಜೈನರ್ ಮತ್ತು ಎಡಿಟರ್ ಆಗಿ ಕಾರ್ಯನಿರ್ವಹಿಸಿದ ಸುಶ್ರುತ್ ಮೂಲತಃ ಶಿರಸಿಯವರು.  ಸದ್ಯ ಸಿನಿಮಾ ಸಂಕಲನ ಗ್ರಾಫಿಕ್ಸ್ ಮಾಡುತ್ತಿದ್ದಾರೆ. ಇವರು ಕೂಡ ನಮ್ಮ ವಾಹಿನಿಗೆ ಕನ್ಸಲ್ಟಂಟ್ ಗ್ರಾಫಿಕ್ ಡಿಜೈನರ್ ಗೌರವ ಸೇವೆಸಲ್ಲಿಸುತ್ತಿದ್ದಾರೆ.

ದಿನೇಶ್ ಕುಮಾರ್ ಎಂ ಎಸ್

ಟೆಕ್ನಿಕಲ್ ಅಸೊಸಿಯೇಟ್ 

              

                ದಿನೇಶ್ ಕುಮಾರ್ ಎಂ ಎಸ್ ಮೂಲತಃ ಮಾಗಡಿಯವರು, ಕರಾವಳಿಯ ಚಾನೆಲ್ ಒನ್ ಸೇರಿದಂತೆ ವಿವಿಧ ವಾಹಿನಿಗಳಲ್ಲಿ , ವೀಡಿಯೊ ಎಡಿಟರ್ ಆಗಿ, ಕ್ಯಾಮೆರಾಮೆನ್ ಆಗಿ ಮತ್ತು ತಂತ್ರಜ್ಞರಾಗಿ ಸೆವೆಸಲ್ಲಿಸುತ್ತಿದ್ದಾರೆ. ನಮ್ಮ ವಾಹಿನಿಗೆ ಕ್ಯಾಮೆರಾಮನ್ ಆಗಿ ತಂತ್ರಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಶ್ವಥ್ ಕುಂದಾಪುರ

ಟೆಕ್ನಿಕಲ್ ಅಸೊಸಿಯೆಟ್

            

               ಅಶ್ವಥ್ ಕುಮಾರ್ ಮೂಲತಃ ಕುಂದಾಪುರದವರು, ಸದ್ಯ ಬೆಂಗಳೂರಿನ ಜನತಾ ವಾಹಿನಿಯಲ್ಲಿ ತಂತ್ರಜ್ಞರಾಗಿ ಸೇವೆಸಲ್ಲಿಸುತ್ತಿದ್ದಾರೆ. ವೀಡಿಯೊ ಎಡಿಟಿಂಗ್, ಛಾಯಾಗ್ರಹಣ, ಸೇರಿ ಹಲವು ತಾಂತ್ರಿಕ ಕೆಸಲಗಳನ್ನು ಅನನ್ಯ ಟಿವಿಗಾಗಿ ಗೌರವಪೂರ್ವಕವಾಗಿ ಮಾಡುತ್ತಿದ್ದಾರೆ.

ಬಸಯ್ಯ ಹಿರೇಮಠ 

ಕ್ಯಾಮರಾಮನ್

              ಬಸಯ್ಯ ಹಿರೇಮಠ, ಗದಗ ಜಿಲ್ಲೆಯ ಹಳ್ಳಿಕೆರಿ ಗ್ರಾಮದವರು, ಡಿಪ್ಲೋಮಾ ಇನ್ ಥಿಯೇಟರ್ ಆರ್ಟ್ಸ್ ಪದವಿ ಪಡೆದ ಇವರು ರಂಗಭೂಮಿ ನಟರು ತಂತ್ರಜ್ಞರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಹತ್ತಾರು ಈವೆಂಟ್ ಕಂಪನಿಗಳಿಗೆ ಛಾಯಾಗ್ರಾಹಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಕೂಡ ಅನನ್ಯ ವಾಹಿನಿಗೆ ಗೌರವ ಸೇವೆಸಲ್ಲಿಸುತ್ತಿದ್ದಾರೆ.

ಇಸ್ಮಾಯಿಲ್ ಲಕ್ಕವಳ್ಳಿ

ಕ್ಯಾಮರಾಮನ್ 

   

                  ಇಸ್ಮಾಯಿಲ್ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯವರು. ಕಳೆದ ಹತ್ತಾರು ವರ್ಷದಿಂದ ಫ್ರಿಲಾನ್ಸ್ ಫೋಟೊಗ್ರಫಿ ಮತ್ತು ವೀಡಿಯೋಗ್ರಫಿ ಮಾಡುತ್ತಾ ಬಂದಿದ್ದಾರೆ. ಸೃಜನಶೀಲ ಛಾಯಾಗ್ರಾಹಕರಾದ ಇಸ್ಮಾಯಿಲ್  ಅನನ್ಯ ವಾಹಿನಿಗಾಗಿಯೂ ಗೌರವ ಸೇವೆ ಸಲ್ಲಿಸುತ್ತಿದ್ದಾರೆ.

                     

ಅನನ್ಯ ಸೋಶಿಯಲ್ ಮೀಡಿಯಾ ಟ್ರಸ್ಟ್ (ರಿ)

ಕಲ್ಚರ್ | ಸೋಶಿಯಲ್ | ಆರ್ಗನೈಜೆಷನ್

                

            ಭವ್ಯ ಭಾರತ ದೇಶ ಮತ್ತು ಸಿರಿಗನ್ನಡ ನಾಡು ಅಪಾರ ವೈವಿಧ್ಯತೆಗೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಗೆ ಹೆಸರುವಾಸಿಯಾದದ್ದು. ಇಂತಹ ನಾಡಿನ, ದೇಶದ, ಸಾಮಾಜಿಕ ಸೇವೆಗೆ ಮತ್ತು ಸಾಂಸ್ಕೃತಿಕ ಸೇವೆಗೆ, ವಿಭಿನ್ನವಾದ ಮಾರ್ಗ ಕಂಡುಕೊಂಡ ಸಂಸ್ಥೆಯೆ ಅನನ್ಯ ಸೋಶಿಯಲ್ ಮೀಡಿಯಾ ಟ್ರಸ್ಟ್ (ರಿ). ಸಾಮಾಜಿಕ ಮಾಧ್ಯಮಗಳು ಮತ್ತು ಸಮೂಹ ಮಾಧ್ಯಮಗಳ ಮೂಲಕವಾಗಿಯೇ ಸಾಂಸ್ಕೃತಿಕ ಸಂಘಟನೆ, ಸಾಮಾಜಿಕ ಸೇವೆಯನ್ನು ಮಾಡುವ ಪ್ರಯತ್ನ ಇಲ್ಲಿದೆ.  ಒಂದು ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನಾ ಸಂಸ್ಥೆಯಾಗಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ನಾಡುನುಡಿಸಂಸ್ಕೃತಿ ಪ್ರಸಾರ ಮಾಡುವ ಮಾಧ್ಯಮವಾಗಿಯೂ `ಅನನ್ಯ ಸೋಶಿಯಲ್ ಮೀಡಿಯಾಕಾರ್ಯನಿರ್ವಹಿಸಲಿದೆ.

          ಸಾಮಾಜಿಕ ಮಾಧ್ಯಮಗಳನ್ನು  ಅತ್ಯುತ್ತಮವಾಗಿ ಬಳಸಿಕೊಂಡು ಮೂಲಕ ಸಾಮಾಜಿಕವಾದ ಮತ್ತು ಸಾಂಸ್ಕೃತಿಕವಾದ ವೇದಿಕೆಯನ್ನು ಹುಟ್ಟುಹಾಕಬೇಕು ಎಂಬ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಒಂದು ಟ್ರಸ್ಟ್ ಅನನ್ಯ ಸೋಶಿಯಲ್ ಮೀಡಿಯಾ ಟ್ರಸ್ಟ್ (ರಿ). ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಕರಕುಚ್ಚಿ ಗ್ರಾಮದ ಸಾಂಸ್ಕೃತಿಕ ಸಂಘಟನಾಸಕ್ತರಾದ `ಎನ್ ವಿ ಅರುಣಕುಮಾರಮತ್ತು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಮುರಡಿ ಗ್ರಾಮದ `ಮಲ್ಲನಗೌಡ ಮಾಲಿಪಾಟೀಲ್‘ (ಕಮಲ್ ನಯನ್ ಪಾಟೀಲ್) ಇವರುಗಳು ಟ್ರಸ್ಟ್ ನಿರ್ದೇಶಕರು.

        ಟ್ರಸ್ಟ್ ಮುಖಾಂತರವಾಗಿ ವಿವಿಧ ರೀತಿಯ ಈವೆಂಟ್ ಸೇವೆಗಳನ್ನು ನೀಡಿ  ಒಂದಷ್ಟು ಉದ್ಯೋಗ ಸೃಷ್ಠಿ ಮಾಡುವುದು. ಮತ್ತು ಟ್ರಸ್ಟ್ ಸೇವೆಗಳಿಂದ ಬರುವ ಆದಾಯ ಮತ್ತು ವಂತಿಗೆ ಹಣದಿಂದ ಸಾಂಸ್ಕೃತಿಕ ಸಂಘಟನೆ ಮತ್ತು ಸಂಸ್ಕೃತಿ ಪ್ರಸಾರ ಮಾಡುವ ಪ್ರಯತ್ನ ಇಲ್ಲಿದೆ. ಸಂಗೀತ, ಸಾಹಿತ್ಯ, ರಂಗಭೂಮಿ, ಸಿನಿಮಾ, ಕ್ರೀಡೆ, ಜೊತೆಗೆ ವಿವಿಧ ಕ್ಷೇತ್ರಗಳ ಸಾಮಾಜಿಕ ಸೇವೆಗಳನ್ನು ನೀಡುವ ಹಂಬಲ ಅನನ್ಯ ಸೊಶಿಯಲ್ ಮೀಡಿಯಾ ಟ್ರಸ್ಟ್ (ರಿ) ಸಂಘಟನೆಯದ್ದಾಗಿದೆ

                     

ಅನನ್ಯ ಧ್ಯೇಯೊದ್ದೇಶಗಳು 

* ಕನ್ನಡ ನಾಡುನುಡಿಸಂಸ್ಕೃತಿ ಪ್ರಸಾರ

* ದೇಶದ ಚಾರಿತ್ರಿಕ ಹಿರಿಮೆಯ ಜಾಗೃತಿ ಮತ್ತು ಪ್ರಸಾರ

* ಸಾಹಿತ್ಯಿಕ ಕಾರ್ಯಕ್ರಮಗಳ ಸಂಘಟನೆ ಮತ್ತು ಪ್ರಸಾರ 

* ರಂಗಭೂಮಿ ಚಟುವಟಿಕೆಗಳ ಪ್ರಸಾರಕ್ಕೆ ಪ್ರೋತ್ಸಾಹ.

* ಯುವಜನತೆಗಾಗಿ ಸಾಂಸ್ಕೃತಿಕ ಸಂಘಟನೆ ಮತ್ತು ಪ್ರಸಾರ.

* ಮಕ್ಕಳಿಗಾಗಿ ವೈವಿಧ್ಯಮಯ ಕಾರ್ಯಕ್ರಮ ಸಂಘಟನೆ.

* ಮಹಿಳೆಯರಿಗಾಗಿ ಸಾಂಸ್ಕೃತಿಕ ಸಂಘಟನೆ ಮತ್ತು ಪ್ರಸಾರ.

* ಸಂಘಸಂಸ್ಥೆಗಳು ಶಾಲಾಕಾಲೇಜುಗಳಲ್ಲಿ ಸಾಂಸ್ಕೃತಿಕ ಸಂಘಟನೆ.

* ಜಾಲತಾಣಗಳ ಮುಖೇನ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಸಾರ.

* ಸಾಮಾಜಿಕ ಮಾಧ್ಯಮಗಳ ಪ್ರಸಾರ ಸೇವೆಗಳನ್ನು ನೀಡುವುದು.

* ಸಾಮಾಜಿಕ ಮಾಧ್ಯಮಗಳಲ್ಲಿ ಸಾಂಸ್ಕೃತಿಕ ವೇದಿಕೆ ನಿರ್ಮಿಸುವುದು.

ಆಡಳಿತ ನಿರ್ದೇಶಕರು

                ಅನನ್ಯ ಸೊಶಿಯಲ್ ಮೀಡಿಯಾ ಸಂಸ್ಥೆಗೆ ಆಡಳಿತ ನಿರ್ದೇಶಕರಾಗಿದ್ದಾರೆ `ಎನ್.ವಿ.ಅರುಣ್ಕುಮಾರ್‘. ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ, ತರೀಕೆರೆ ತಾಲ್ಲೂಕಿನ ಕರಕುಚ್ಚಿ ಗ್ರಾಮದವರು. 4ನೇ ರ್ಯಾಂಕ್ ನೊಂದಿಗೆ  ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ತೊಟಗಾರಿಕೆ ಮತ್ತು ಕೃಷಿಯನ್ನು ವೃತ್ತಿಯನ್ನಾಗಿ ಸ್ವೀಕರಿಸಿ ಯಶಸ್ವಿಯಾಗಿದ್ದಾರೆ.   ನಾವಾಯ್ತು ನಮ್ಮ ವೃತ್ತಿಯಾಯ್ತು ಎನ್ನದೇ ಗ್ರಾಮೀಣ ಸಂಘಟನೆ, ಸಾಮಾಜಿಕ, ಸಾಂಸ್ಕೃತಿಕ ಸೇವಾ ಸಂಘಟನೆ ಮಾಡುವುದು ಅರುಣ್ಕುಮಾರ್ ರವರ ಮುಖ್ಯ ಹವ್ಯಾಸ. ದಿಶೆಯಲ್ಲಿ ಸ್ವಗ್ರಾಮ ಕರಕುಚ್ಚಿ ರೈತರಿಗೆ ಹೈನುಗಾರಿಕೆ ಮತ್ತು ಹಾಲಿನ ಡೈರಿಗಳ ನಿರ್ವಹಣೆಯಲ್ಲಿ ಅತ್ಯುತ್ತಮ ತರಬೇತಿ ನೀಡಿ, ಗ್ರಾಮದ ಹೈನುಗಾರಿಕೆ ಯಶಸ್ಸಿಗೆ ದುಡಿದಿದ್ದಾರೆ. ಜೊತೆಗೆ ಸಂಗೀತ, ಸಾಹಿತ್ಯ, ರಂಗಭೂಮಿ, ಸಿನಿಮಾ, ಮತ್ತು ಪತ್ರಿಕೋದ್ಯಮದಲ್ಲಿ ಆಸಕ್ತರಾದ ಅರುಣಕುಮಾರ್ ಎಲ್ಲ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಸಂಘಟನೆ ಮಾಡುತ್ತಿರುತ್ತಾರೆ. ಗ್ರಾಮದಲ್ಲಿ ಶಾಲಾ ಸಂಘಟನೆ, ಸಾಂಸ್ಕೃತಿಕ ಸಂಘಟನೆ ಮಾಡುವುದರಲ್ಲಿಯೂ ಸದಾ ಮುಂದಿರುತ್ತಾರೆ. ಈಗಾಗಲೇ ಗ್ರಾಮದ ಸರ್ಕಾರಿ ಶಾಲಾ ಅಭಿವೃದ್ಧಿಗಾಗಿಯೂ ಗೆಳೆಯರ ಬಳಗವನ್ನು ಸಂಘಟಿಸಿ, ನಮ್ಮ ಶಾಲೆ ನಮ್ಮ ನೆನಪು ಎಂಬ ಸಂಘಟನೆಯನ್ನು ಸ್ಥಾಪಿಸಿ ಮೂಲಕ ಸರ್ಕಾರಿ ಶಾಲಾಭಿವೃದಿಗೂ ಶ್ರಮಿಸುತ್ತಿದ್ದಾರೆ.

          ಪ್ರಸ್ತುತ ದಿನಮಾನದಲ್ಲಿ ಸಾಮಾಜಿಕ ಮಾಧ್ಯಮಗಳು ಸಮಾಜದಲ್ಲಿ ಸಾಕಷ್ಟು ಮಹತ್ವದ ಪಾತ್ರವಹಿಸುತ್ತಿರುವುದು ಮತ್ತು ಚರ್ಚೆಗಳನ್ನು ಹುಟ್ಟುಹಾಕುತ್ತಿರುವುದನ್ನು ಮನಗಂಡ ಅರುಣ್ಕುಮಾರ್ ರವರು, ಸಾಮಾಜಿಕ ಮಾಧ್ಯಮಗಳನ್ನೇ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನಾ ವೇದಿಕೆಯನ್ನಾಗಿ ಬಳಸಿಕೊಳ್ಳಲು ಪರಿಕಲ್ಪಿಸಿದ್ದಾರೆ. ಅನನ್ಯ ಸೊಶಿಯಲ್ ಮೀಡಿಯಾ ಸಂಸ್ಥೆಯನ್ನು ಸ್ಥಾಪಿಸಿ ಇದರ ಮೂಲಕ ಯುವಸಮುದಾಯಕ್ಕೆ ಮತ್ತು ಸಾರ್ವಜನಿಕ ವಲಯಕ್ಕೆ ಸಾಂಸ್ಕೃತಿಕ ಕೊಡುಗೆ ನೀಡಲು ಸಂಕಲ್ಪ ಮಾಡಿದ್ದಾರೆ. ಅನನ್ಯ ಸೋಶಿಯಲ್  ಮೀಡಿಯಾ ಸಂಸ್ಥೆಯ ಆಡಳಿತ ನಿರ್ದೇಶಕರಾಗಿ ವಿಭಿನ್ನವಾದ ಮಾರ್ಗದಲ್ಲಿ ನಾಡುನುಡಿಸಂಸ್ಕೃತಿ ಪ್ರಸಾರ ಸೇವೆಗಾಗಿ ಉತ್ಸುಕರಾಗಿದ್ದಾರೆ.    

                           ಕಾರ್ಯಕ್ರಮ ನಿರ್ದೇಶಕರು

 ಅನನ್ಯ ಸೊಶಿಯಲ್ ಮೀಡಿಯಾ ಸಂಸ್ಥೆಯು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸಮೂಹ ಮಾಧ್ಯಮಗಳಲ್ಲಿ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ಮಿಸಿ ಪ್ರಸಾರ ಮಾಡುವ ಪ್ರಯತ್ನದಲ್ಲಿದೆ. ಸಾಹಿತ್ಯ ಸಂಗೀತ ರಂಗಭೂಮಿ ಕ್ರೀಡೆ ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳ ನಿರ್ಮಾಣ ಮತ್ತು ಸಾಮಾಜಿಕ ಸೇವಾ ಸಂಘಟನಾ ಪ್ರಯತ್ನ ಇಲ್ಲಿರುತ್ತದೆ. ದಿಶೆಯಲ್ಲಿ ಅನನ್ಯ ಸೋಶಿಯಲ್ ಮೀಡಿಯಾ ಸಂಸ್ಥೆಯು ಸಮಕಾಲೀನ ವಿಚಾರಗಳೊಂದಿಗೆ ವಿವಿಧ ಕ್ಷೇತ್ರಗಳ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿ ನಿರ್ದೇಶನ ಮಾಡುವ ಜವಾಬ್ದಾರಿಯನ್ನು ಮಲ್ಲನಗೌಡ ಮಾಲಿಪಾಟೀಲ್ (ಕಮಲ್ ನಯನ್ ಪಾಟೀಲ್) ರವರಿಗೆ ನೀಡಿರುತ್ತದೆ.

            ಮಲ್ಲನಗೌಡ ಮಾಲಿಪಾಟೀಲ್ (ಕಮಲ್ ನಯನ್ ಪಾಟೀಲ್) ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಮುರಡಿ ಗ್ರಾಮದವರು. ಶಿಕ್ಷಣ, ರಂಗಶಿಕ್ಷಣ, ಸಿನಿಮಾ ತಂತ್ರಜ್ಞಾನದಲ್ಲಿ ಡಿಪ್ಲೋಮಾ ಪದವಿಧರರು. ಕಳೆದ ಹತ್ತು ವರ್ಷಗಳಿಂದ ರಂಗಭೂಮಿ ಚಿತ್ರರಂಗ ಮತ್ತು ಪತ್ರಿಕೊದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ವಿವಿಧ ಸುದ್ದಿ ವಾಹಿನಿಗಳಿಗೆ ನಿರೂಪಕರಾಗಿ ಮತ್ತು ಕಾರ್ಯಕ್ರಮ ನಿರ್ದೇಶಕರಾಗಿಯೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಂಸ್ಕೃತಿಕ ಮತ್ತು ಸಾಮಾಜಿಕ ಜಾಗೃತಿಗಾಗಿ ಸಾರ್ವಜನಿಕ ವಲಯಕ್ಕೆ ಮತ್ತು ಯುವಸಮುದಾಯಕ್ಕಾಗಿ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ರೂಪಿಸುವುದು ಎಂ ಬಿ ಮಾಲಿಪಾಟೀಲ್ ರವರ ಮೊದಲ ಆದ್ಯತೆಯಾಗಿದೆ. ಕಲೆ, ಸಂಸ್ಕೃತಿ, ಕ್ರೀಡೆ ಹೀಗೆ ಎಲ್ಲ ಕ್ಷೇತ್ರಗಳಿಗೂ ಸಂಭಂದಿಸಿದಂತೆ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರಚುರಪಡಿಸುವ ಮತ್ತು ಸಾಮಾಜಿಕ ಜಾಗೃತಿಯನ್ನು ಉಂಟುಮಾಡುವ ಕಾರ್ಯಕ್ರಮಗಳನ್ನು ರೂಪಿಸುವ ಹಂಬಲದೊಂದಿಗೆ ಕಾರ್ಯಕ್ರಮ ನಿರ್ದೇಶಕರಾಗಿ ಸಂಸ್ಥೆಯೊಂದಿಗೆ ಕೈಜೋಡಿಸಿದ್ದಾರೆ ಮಲ್ಲನಗೌಡ ಮಾಲಿಪಾಟೀಲ್. (ಕಮಲ್ ನಯನ್ ಪಾಟೀಲ್)   

ನಮ್ಮ ಜೊತೆ ಸಿನಿಕಿರುತೆರೆ ಗಣ್ಯರು

ಸಿನಿಮಾ ಕಿರುತೆರೆ ರಂಗಭೂಮಿ ಸಂಗೀತ ಕ್ರೀಡೆ ಮತ್ತು ಸಾಹಿತ್ಯ ಕ್ಷೇತ್ರದ ಗಣ್ಯರು

        

          ಸಾಹಿತ್ಯಿಕ ವಲಯ ಮತ್ತು ವೈಚಾರಿಕ ವಲಯದ ಸಾಮಾಜಿಕ ಜಾಗೃತಿಯ ಹತ್ತು ಹಲವು ಕಾರ್ಯಕ್ರಮಗಳಿಗೆ ಕರ್ನಾಟಕದ ಹಲವು ಹಿರಿಯ ಸಾಹಿತಿಗಳು ಬರಹಗಾರರು ಚಿಂತಕರು ಮತ್ತು ಪತ್ರಕರ್ತರು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಸಂಸ್ಥೆಯ ನಿರಂತರ ಚಟುವಟಿಕೆಗಳಿಗೆ ತಮ್ಮ ಸೃಜನಾತ್ಮಕ ಪ್ರತಿಭಾವಂತಿಕೆಯನ್ನು ಧಾರೆಯರೆಯಲಿದ್ದಾರೆ. ರಂಗಭೂಮಿ ಸಂಗೀತ ಕಿರುತೆರೆ ಮತ್ತು ಸಿನಿಮಾ ಮತ್ತು ಕ್ರೀಡಾ ಕ್ಷೇತ್ರಗಳ ಸಾಮಾಜಿಕ ಕಾರ್ಯಕ್ರಮಗಳ ಸಂಘಟನೆ ಮತ್ತು ಸೇವೆಗಾಗಿ ಎಲ್ಲ ಕ್ಷೇತ್ರಗಳ ಖ್ಯಾತ ಕಲಾವಿದರು ಪ್ರೋತ್ಸಾಹಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮುಖೇನವಾಗಿ ನಾಡುನುಡಿ, ಕಲೆಸಂಸ್ಕೃತಿಗಳ ಸೇವೆಗಾಗಿ ಇವರೆಲ್ಲರ ಸಹಕಾರವನ್ನು ಪಡೆಯುತ್ತಿದ್ದೇವೆ

ನಮ್ಮ ಜೊತೆ ಟಿವಿ ಚಾನೆಲ್ಸ್ ,ಕೇಬಲ್ ಆಪರೇಟರ್ಸ್

                 ಇಂದಿನ ಮಾಧ್ಯಮರಂಗದಲ್ಲಿ ಎಲೆಕ್ಟ್ರಾನಿಕ್ ಮೀಡಿಯಾಗಳ ಪಾತ್ರವೂ ಕೂಡ ಮಹತ್ತರದ್ದು. ದಿಶೆಯಲ್ಲಿ ಕನ್ನಡ ಮಾಧ್ಯಮಲೋಕದ ಅನೇಕ ಟಿವಿ ಚಾನೆಲ್ಗಳ ಸಹಕಾರವನ್ನು ಪಡೆದುಕೊಳ್ಳುತ್ತಿದ್ದೆವೆ. ಹಲವಾರು ಕಾರ್ಯಕ್ರಮಗಳ ಪ್ರಸಾರಕ್ಕಾಗಿ ಅಗತ್ಯ ಸಹಾಯಸಹಕಾರವನ್ನು ಪಡೆಯುತ್ತಿದ್ದೇವೆ. ಇಂದು ಕರ್ನಾಟಕದಾದ್ಯಂತ ಹತ್ತಾರು ಪ್ರಾದೇಶಿಕ ಮತ್ತು ಸ್ಥಳಿಯ ಟಿವಿ ವಾಹಿನಿಗಳು ಕೆಲಸ ಮಾಡುತ್ತಿವೆ. ಜಿಲ್ಲಾಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಅಂತಹ ವಾಹಿನಿಗಳು ಮತ್ತು ಕೆಬಲ್ ಆಪರೇಟರ್ಗಳು ನಮ್ಮ ಸಂಸ್ಥೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಸಾರಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ.

ನಮ್ಮೊಂದಿಗೆ ಅನನ್ಯ ಈವೆಂಟ್ಸ್

              ಅನನ್ಯ ಸೋಶಿಯಲ್ ಮೀಡಿಯಾ ಸಂಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸಲಿದೆ`ಅನನ್ಯ ಈವೆಂಟ್ಸ್ತಂಡ. ಇದು ಅನನ್ಯ ಸೋಶಿಯಲ್ ಮೀಡಿಯಾ ಟ್ರಸ್ಟ್ ಆರಂಭಿಸಿದ ಈವೆಂಟ್ಸ್ ಕಾರ್ಯ ನಿರ್ವಹಿಸುವ ತಂಡ. ಸಂಸ್ಥೆಯು ಸಮಾಜದಲ್ಲಿ ನಡೆಯುವ ವಿವಿಧ ರೀತಿಯ ಈವೆಂಟ್ಸ್ ಸೇವೆಗಳನ್ನು ಪಡೆದುಕೊಂಡು ನಿಭಾಯಿಸಿ ತತ್ಫಲವಾಗಿ ದೇಣಿಗೆಯನ್ನು ಸೇವಾಶುಲ್ಕವಾಗಿ ಸಂಗ್ರಹಿಸಿಕೊಳ್ಳುತ್ತೆ. ರೀತಿ ಬಂದ ವಂತಿಗೆ ಆದಾಯವನ್ನು ಟ್ರಸ್ಟ್ ಸಂಘಟನಾತ್ಮಕ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುತ್ತೆ. ಈವೆಮಟ್ಸ್ ಟೀಮ್ ಕೂಡ ಸಂಸ್ಥೆಯ ಎಲ್ಲ ಸಾಮಾಜಿಕ ಸಂಘಟನೆಗಳ ಮತ್ತು ಸಾಂಸ್ಕೃತಿಕ ಕಾರ್ಯಗಳಿಗೂ ಕೈಜೋಡಿಸಿದೆ. ಸಂಸ್ಥೆಯ ಬಹುತೆಕ ತಾಂತ್ರಿಕ ಕೆಲಸಕಾರ್ಯಗಳಲ್ಲಿ ಅನನ್ಯ ಈವೆಂಟ್ಸ್ ಹೊಣೆಗಾರಿಕೆ ವಹಿಸಿಕೊಂಡಿದೆ.   

ನಮ್ಮೊಂದಿಗೆ ನೀವು ಕೂಡ

ಅನನ್ಯ ಸೊಶಿಯಲ್ ಮೀಡಿಯಾ ಸಂಸ್ಥೆಯ ಪರಿಕಲ್ಪನೆಯೆ ವಿಭಿನ್ನವಾದದ್ದು. ಇದೊಂದು ಸಾಮಾಜಿಕ ಮಾಧ್ಯಮ ಸಂಸ್ಥೆಯಾಗಿ ನಾಡುನುಡಿ ಸಂಸೃತಿ ಪ್ರಸಾರ ಮಾಡಬಯಸುತ್ತೆ. ಒಂದು ಸಾಮಾಜಿಕ ಸಂಘಟನಾ ಸಂಸ್ಥೆಯಾಗಿ ಸಾಮಾಜಿಕ ಜಾಗೃತಿ ಮೂಡಿಸುವ ಆಶಯ ಹೊಂದಿದೆ. ಕಲೆ ಸಂಸ್ಕೃತಿ ಪೊಷಿಸುವ ನಿಟ್ಟಿನಲ್ಲಿ ಉತ್ತಮ ವೇದಿಕೆ ನಿರ್ಮಿಸಲು ಬಯಸುತ್ತೆ. ಹಾಗಾಗಿ ವಿವಿಧ ರೀತಿಯ ಪರಿಕಲ್ಪನೆಗಳನ್ನು, ಪ್ರಯೋಗಗಳನ್ನು, ವೇದಿಕೆಗಳನ್ನು ಸೃಷ್ಠಿಸುವ ಪ್ರಯತ್ನವಿಲ್ಲಿದೆ. ಆದ್ಧರಿಂದ ಸಂಸ್ಥೆಯ ಸದಾಶಯಕ್ಕೆ ಸ್ಪಂದಿಸುವ ನಿಮ್ಮೆಲ್ಲರ ಅಭಿಪ್ರಾಯಗಳಿಗೆ ಇಲ್ಲಿ ಸದಾ ಸ್ವಾಗತವಿದೆ. ಇಲ್ಲಿ ಮೂಡಿಬರುವ ಕಾರ್ಯಕ್ರಮಗಳು ಸಂಘನೆಗೊಳ್ಳುವ ಅಭಿಯಾನಗಳು ಇವೆಲ್ಲವೂಗಳಿಗೂ ನಿಮ್ಮ ಸಲಹೆ ಸೂಚನೆಗಳು ಅತ್ಯಗತ್ಯವಾಗಿ ಬೇಕಿದೆ. ದಯವಿಟ್ಟು ನೀವೂ ನಮ್ಮ ಜೊತೆ ಪಾಲ್ಗೊಳ್ಳಿ ನಿಮ್ಮ ಪ್ರತಿಭಾವಂತಿಕೆಯೊಂದಿಗೆ ಅನನ್ಯ ವಾಹಿನಿಯ ಮೂಲಕ ಸಮಾಜಕ್ಕೆ ಕೊಡುಗೆ ನೀಡಬಹುದು. ಸಂಸ್ಥೆಯ ವಿವಿಧ ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆಗಳಿಗೆ ದೇಣಿಗೆ ವಂತಿಗೆ ನೀಡಿ  ಕೈಜೋಡಿಸಬಹುದು. ಜೊತೆ ಜೊತೆಗೆ ಪ್ರಸಾರಗೊಳ್ಳುವ ಕಾರ್ಯಕ್ರಮಗಳ ರೂಪುರೇಷೆ ಮತ್ತು ಸ್ವರೂಪ ಮತ್ತಿತರೆ ವಿಚಾರವಾಗಿ ಮಾರ್ಗದರ್ಶನವನ್ನೂ ಮಾಡಬಹುದು. ನಿಮ್ಮ ಸೃಜನಶೀಲತೆ ಅನನ್ಯ ವಾಹಿನಿಯ ಮೂಲಕ ಸಮಾಜಕ್ಕೆ ತಲುಪಲಿ ಎಂಬುದೆ ನಮ್ಮ ಸದಾಶಯ. ಹಾಗಾಗಿ ನೀವೂ ಕೂಡ ಸದಾ ನಮ್ಮೊಂದಿಗಿದ್ದೀರಿ ಎಂದು ಭಾವಿಸುತ್ತೇವೆ

Pin It on Pinterest

Share This